ಹುಡುಕಿ

ಕುಕಿ ಪಾಲಿಸಿ
ನ್ಯಾವಿಗೇಷನ್‌ ಅನ್ನು ಸುಲಭವಾಗಿಸಲು ವ್ಯಾಟಿಕನ್‌ ನ್ಯೂಸ್‌ ಸುದ್ದಿತಾಣವು ತಾಂತ್ರಿಕ ಹಾಗೂ ಅದೇ ರೀತಿಯ ಕುಕಿಗಳನ್ನು ಬಳಸುತ್ತದೆ ಹಾಗೂ ಸೇವೆಗಳನ್ನು ಖಾತರಿಪಡಿಸುತ್ತದೆ. ಮುಂದುವರೆದು, ಥರ್ಡ್‌ ಪಾರ್ಟಿಗಳ ತಾಂತ್ರಿಕ ಹಾಗೂ ವಿಶ್ಲೇಷಣಾತ್ಮಕ ಕುಕಿಗಳನ್ನು ಸಹ ಬಳಸಿಕೊಳ್ಳಬಹುದು. ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ. ಇದನ್ನು ಮುಚ್ಚುವ ಮೂಲಕ ನೀವು ಕುಕಿಗಳ ಬಳಕೆಗೆ ಒಪ್ಪುತ್ತೀರಿ.
ಒಪ್ಪಿಕೊಳ್ಳುತ್ತೇನೆ
ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್ ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್  (ANSA)

ಉದಾರವಾಗಿ ನೀಡುವುದು ಬದುಕಿನ ಪರಿಪೂರ್ಣತೆಯನ್ನು ಕಲಿಸುತ್ತದೆ

ಭಾನುವಾರ ವ್ಯಾಟಿಕನ್ ನಗರದಲ್ಲಿ ತ್ರಿಕಾಲ ಪ್ರಾರ್ಥನೆಯಲ್ಲಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಕೇವಲ ಪ್ರಾಪಂಚಿಕ ವಸ್ತುಗಳಿಂದ ನಮ್ಮ ಜೀವನವು ಪರಿಪೂರ್ಣವಾಗುವುದಿಲ್ಲ. ಮೊದಲಿಗೆ ನಮ್ಮ ಜೀವನದಲ್ಲಿ ಉದಾರವಾಗಿ ನೀಡುವುದನ್ನು ನಾವು ಅಳವಡಿಸಿಕೊಂಡಾಗ ಮಾತ್ರ ಬದುಕು ಪರಿಪೂರ್ಣತೆಯೆಡೆಗೆ ಸಾಗುತ್ತದೆ ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಭಾನುವಾರ ವ್ಯಾಟಿಕನ್ ನಗರದಲ್ಲಿ ತ್ರಿಕಾಲ ಪ್ರಾರ್ಥನೆಯಲ್ಲಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಕೇವಲ ಪ್ರಾಪಂಚಿಕ ವಸ್ತುಗಳಿಂದ ನಮ್ಮ ಜೀವನವು ಪರಿಪೂರ್ಣವಾಗುವುದಿಲ್ಲ. ಮೊದಲಿಗೆ ನಮ್ಮ ಜೀವನದಲ್ಲಿ ಉದಾರವಾಗಿ ನೀಡುವುದನ್ನು ನಾವು ಅಳವಡಿಸಿಕೊಂಡಾಗ ಮಾತ್ರ ಬದುಕು ಪರಿಪೂರ್ಣತೆಯೆಡೆಗೆ ಸಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ಭಾನುವಾರದ ಶುಭ ಸಂದೇಶದ ವಾಚನವನ್ನು ಧ್ಯಾನಿಸಿದ ವಿಶ್ವಗುರು ಫ್ರಾನ್ಸಿಸ್ ಅವರು "ಏಸುಕ್ರಿಸ್ತರು 5000 ಜನರಿಗೆ ಆಹಾರವನ್ನು ನೀಡಿದರು. ಹೀಗೆ ಅವರು ನೀಡಿದ ಆಹಾರವನ್ನು ಜನರು ಸೇವಿಸಿದ ನಂತರವೂ ಸಹ, ಉಳಿದ ಎಲ್ಲವನ್ನು ಒಟ್ಟುಗೂಡಿಸಿದಾಗ 12 ಬುಟ್ಟಿಗಳಷ್ಟಾದವು. ಆ ಸಂದರ್ಭದಲ್ಲಿ ಯೇಸುವಿನ ಈ ಕಾರ್ಯವನ್ನು ಜನರೆಲ್ಲರೂ ಒಂದು ಅದ್ಭುತವಾಗಿ ಕಂಡರು ಮಾತ್ರವಲ್ಲದೆ ಅವರು ತಮ್ಮ ಪ್ರಾಪಂಚಿಕ ಹಸಿವನ್ನು ನೀಗಿಸಿಕೊಳ್ಳಲು ಹಾತೊರೆಯುತ್ತಿದ್ದರು. ಆದರೆ ಅವರಿಗೆ ತಮ್ಮಲ್ಲಿ ಇದ್ದುದ್ದನ್ನು ಹಂಚಿಕೊಂಡರೆ ಎಲ್ಲರಿಗೂ ಸಾಕಾಗುತ್ತದೆ ಎಂಬ ಮನೋಭಾವ ಇರಲಿಲ್ಲ." ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು "ಆ ಜನರಂತೆ ನಾವು ಸಹ ಕೆಲವೊಮ್ಮೆ ಕೇವಲ ನಮ್ಮ ಹಸಿವನ್ನು ನೀಗಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಸಹೋದರ ಸಹೋದರಿಯರು ಹಸಿವಿನಿಂದ ನರಳುತ್ತಿದ್ದರೂ ಸಹ ನಾವು ಅವರಡೆಗೆ ದೃಷ್ಟಿಯನ್ನು ಬೀರುವುದಿಲ್ಲ. ನಮ್ಮಲ್ಲಿರುವ ಕೊಂಚವನ್ನು ಅವರ ಜೊತೆ ಹಂಚಿಕೊಂಡರೆ ಅವರು ಬದುಕುವ ಸಂಭವವು ಹೆಚ್ಚಿರುತ್ತದೆ. ಆದರೆ ನಾವು ವಿಫಲವಾಗುತ್ತೇವೆ" ಎಂದು ಹೇಳಿದರು.

ನಮ್ಮ ಆತ್ಮದ ದಾಹವನ್ನು ನಮ್ಮ ಆತ್ಮದ ದಾಹವನ್ನು ನೀಗಿಸಿಕೊಳ್ಳಲು ನಾವು ಯೇಸು ಎಂಬ ಜೀವಂತ ರೊಟ್ಟಿಯನ್ನು ಪ್ರತಿದಿನವೂ ಸೇವಿಸಬೇಕು. ಆ ಮೂಲಕ ಪ್ರಭುವನ್ನು ನಂಬಲಿಕ್ಕೆ ಬರಮಾಡಿಕೊಂಡು ಅವರಂತೆ ಉದಾರ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ವಿಶ್ವಗುರು ಫ್ರಾನ್ಸಿಸ್ ಹೇಳುತ್ತಾ ತಮ್ಮ ಪ್ರಾರ್ಥನೆಯನ್ನು ಮುಗಿಸಿದರು.

04 August 2024, 18:21
Prev
June 2025
SuMoTuWeThFrSa
1234567
891011121314
15161718192021
22232425262728
2930     
Next
July 2025
SuMoTuWeThFrSa
  12345
6789101112
13141516171819
20212223242526
2728293031